top of page
Search

ಯೋಗ ಮತ್ತು ಆಯುರ್ವೇದ

Updated: Jul 9, 2025

ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳು ಪುರುಷಾರ್ಥಗಳು (ಜೀವನದ ಗುರಿಗಳು). ಇದನ್ನು ಸಾಧಿಸಲು ದೃಢ ದೇಹ, ಮನೋ ಸ್ಥೈರ್ಯ ಮತ್ತು ಆರೊಗ್ಯಕರ ಜೀವನಶೈಲಿಗಳೆ ಮೆಟ್ಟೆಲು. ಆದ್ದರಿಂದ ಆಯುರ್ವೇದದಲ್ಲಿ ರೋಗದ ಚಿಕಿತ್ಸೆಯ ಜೊತೆಗೆ ಸ್ವಾಸ್ಥ್ಯಕರ ಜೀವನದ ನಿಯಮಗಳನ್ನು ತಿಳಿಸಿದ್ದಾರೆ. ಇದರಲ್ಲಿ ಒಂದು ವ್ಯಾಯಾಮ.

ವ್ಯಾಯಾಮವೆಂದರೆ ದೈಹಿಕ ಚಲನವಲನಗಳ ಮೂಲಕ ದೇಹಕ್ಕೆ ಪುಷ್ಟಿ ತುಂಬುವುದು ಮತ್ತು ಸ್ಥಿರತೆಯನ್ನು ತರುವುದು. ಇದರಿಂದ ದೇಹಕ್ಕೆ ಲಘುತ್ವ (ಹಗುರತ್ವ) ದೊರೆಯುತ್ತದೆ ಹಾಗೂ ಕೆಲಸ ಮಾಡುವ ಶಕ್ತಿ ತೊಂದರೆಗಳನ್ನು ಮತ್ತು ದುಃಖಗಳನ್ನು ಎದುರಿಸುವ ಶಕ್ತಿಗಳು ಹೆಚ್ಚಾಗಿ ಚಯಾಪಚಯ ಕ್ರಿಯೆಗಳು ವೃದ್ಧಿಸುತ್ತದೆ. ಈ ಎಲ್ಲಾ ಅಂಶಗಳನ್ನು ನಾವು ದಿನನಿತ್ಯದ ಯೋಗಾಭ್ಯಾಸಗಳಿಂದ ಪಡೆದುಕೊಳ್ಳಬಹುದು.

ಆದರೆ ಯೋಗವು ಬರಿ ವ್ಯಾಯಾಮವಲ್ಲ ಚರಕ ಸಂಹಿತೆಯಲ್ಲಿ ಯೋಗದ ಬಗ್ಗೆ ತಿಳಿಸುವಾಗ ಹೀಗೆ ಹೇಳಿದ್ದಾರೆ. ದೇಹ ಮತ್ತು ಮನಸ್ಸು ನೋವಿಗೆ ಅಧಿಷ್ಠಾನ. ಈ ನೋವು ಆತ್ಮ, ಇಂದ್ರಿಯ, ಮನಸ್ಸು ಮತ್ತು ಇಂದ್ರಿಯಾರ್ಥದ ಸಂಯೋಗದಿಂದ ಉತ್ಪತ್ತಿಯಾಗುತ್ತದೆ. ಯೋಗವು ಮನಸ್ಸು ಮತ್ತು ಇಂದ್ರಿಯಗಳನ್ನು ಹಿಡಿತದಲ್ಲಿಟ್ಟು ನೋವಿನಿಂದ ಹೊರಬರಲು ಸಹಕರಿಸುತ್ತದೆ. ಆದ್ದರಿಂದ ಯೋಗವು ಆಸನ, ಪ್ರಾಣಾಯಾಮ ಇತ್ಯಾದಿಗಳ ಮೂಲಕ ಪುರುಷಾರ್ಥದ ಕಡೆಗೆ ನಡೆಸುತ್ತದೆ.


ಆಯುರ್ವೇದದ ಕೊಡುಗೆ ಏನು? ಯೋಗಾಭ್ಯಾಸದ ಜೊತೆಗೆ ದಿನಚರ್ಯ, ಋತುಚರ್ಯ ಮತ್ತು ಆಹಾರ ಕ್ರಮಗಳ ಮೂಲಕ ಆರೋಗ್ಯದ ಹಿತಕ್ಕೆ ಸಹಕರಿಸುತ್ತದೆ. ದಿನನಿತ್ಯದ ಅಭ್ಯಂಗ, ನಸ್ಯಾದಿಗಳು ಶಾರೀರಿಕ ಶಕ್ತಿಯ ಜೊತೆಗೆ ಮಾನಸಿಕ ನೆಮ್ಮದಿಯನ್ನು ಹೆಚ್ಚಿಸುತ್ತದೆ. ವಸಂತದಲ್ಲಿ ವಮನ, ಶರಧಿಯ ವಿರೇಚನ ಇತ್ಯಾದಿಗಳು ದೇಹದ ಕಲ್ಮಶಗಳನ್ನು ಹೊರಹಾಕುತ್ತವೆ. ಲೇಪಾದಿಗಳು ತ್ವಚೆಯ ಆರೋಗ್ಯ ಹೆಚ್ಚಿಸಿ ಆತ್ಮವಿಶ್ವಾಸ ನೀಡುತ್ತದೆ ಈಗಿನ ಜಗತ್ತಿಗೆ ಒತ್ತಡವೆಂಬುದು ಸರ್ವೇಸಾಮಾನ್ಯ ಶಿರೋದಾರದಂತಹ ಚಿಕಿತ್ಸೆ ಒತ್ತಡ ನಿವಾರಣೆಗೆ ಸಹಾಯವಾಗಿದೆ.


ಆಯುರ್ವೇದ ಮತ್ತು ಯೋಗದ ಮೂಲಭೂತ ಸಿದ್ಧಾಂತವು ಮನಸ್ಸು ಮತ್ತು ದೇಹವನ್ನು ಆರೋಗ್ಯವಾಗಿರಿಸಿ ನಮ್ಮನ್ನು ಗುರಿಗಳೆಡೆಗೆ ಸಾಗಿಸುವುದು. ಆದ್ದರಿಂದ ಒಂದೇ ಮರದ ಎರಡು ಕೊಂಬೆಯಾಗಿರುವ ಇವೆರಡರ ಮಿಶ್ರಣದಿಂದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು  ಜೊತೆಗೆ ರೋಗಗಳಿಂದ ನಿರ್ಮುಕ್ತರಾಗಬಹುದು.


-ಡಾ. ಪ್ರಕೃತಿ.ಟಿ.ಎಸ್.

ಆಯುರ್ವೇದ ವೈದ್ಯೆ.

ವಂದೆ ಆಯುರ್ವೇದ ವೆಲ್ನೆಸ್ ಸೆಂಟರ್, ಮೈಸೂರು. 


 
 
 

Recent Posts

See All
ಆರೋಗ್ಯಕ್ಕಾಗಿ ವೇಗ:

ವೇಗವಾದ ಜೀವನದಲ್ಲಿ ವೇಗಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ವೇಗವೆಂದರೆ “ನಿತ್ಯಕರ್ಮಗಳು (Natural urges)”. ಇದರಲ್ಲಿ ಎರಡು ವಿಧ - ಧಾರಣೀಯ ಮತ್ತು ಅಧಾರಣೀಯ...

 
 
 

Comments


bottom of page